ಅನುಭವಸೂತ್ರ

ಎಂಟು ಅಧಿಕರಣಗಳಿಂದ ಕೂಡಿದ ವೀರಶೈವ ಷಟ್‍ಸ್ಥಲ ಸಿದ್ಧಾಂತವನ್ನು ನಿರೂಪಿಸುವ ಧರ್ಮಗ್ರಂಥ. ಕರ್ತೃ ಬಿಜಾಪುರ ಜಿಲ್ಲೆಯ ಮಗ್ಗೆ ಊರಿನ ಮಾಯಿದೇವ. ಈತ ಕನ್ನಡದಲ್ಲಿ ಶತಕತ್ರಯ, ಷಟ್‍ಸ್ಥಲ ಗದ್ಯ. ಏಕೋತ್ತರ ಷಟ್‍ಸ್ಥಲ ಗದ್ಯ ಎಂಬ ಗ್ರಂಥಗಳನ್ನೂ ಸಂಸ್ಕøತದಲ್ಲಿ ವಿಶೇಷಾರ್ಥ ಪ್ರಕಾಶಿಕೆ, ಶತಕತ್ರಯಂ, ಮಂತ್ರಭಾಷ್ಯ, ಎಂಬ ಗ್ರಂಥಗಳನ್ನೂ ಬರೆದಿದ್ದಾನೆ. ಅನುಭವಸೂತ್ರದಲ್ಲಿ ವಾತುಲಾಗಮದ ಉತ್ತರಭಾಗದಲ್ಲಿ ಹೇಳಿರುವ ಷಟ್‍ಸ್ಥಲ ಸಿದ್ಧಾಂತವನ್ನು ಸಂಗ್ರಹಿಸಲಾಗಿದೆ.  

 
(ಬಿ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ